ಈ ನಿಟ್ಟಿನಲ್ಲಿ ಜನವರಿ ೧೮ ನೇ ತಾರೀಖು ನಡೆಯುವ ವಿಶ್ವ ಕನ್ನಡಿಗರ ಜಾಗೃತಿ ಸಮಾವೇಶ ಬಹಳ ಒಳ್ಳೆಯ ಕಾರ್ಯಕ್ರಮ. ಬರೀ ಸಮಸ್ಯೆಗಳನ್ನು ಹೇಳಿಕೊಂಡು,
ನಾವು ಉದ್ದಾರ ಆಗೊಲ್ಲ ಅನ್ನೊ ರೀತಿಯಲ್ಲಿ, ಒಂದೆರೆಡು ವರದಿ ಜಾರಿ ಆಗಬೇಕು ಅದರಿಂದಲೇ ಇಡಿ ಕರ್ನಾಟಕದ ಉದ್ದಾರ ಅನ್ನೊ ಮಾತುಗಳನ್ನು ಆಡುವರ ಮಧ್ಯೆ
ಇದು ಎದ್ದು ನಿಲ್ಲುತ್ತದೆ. ಉದ್ಯೋಗ-ಉದ್ದಿಮೆ ಮೇಲೆ ನಡೆಯುವ ವಿಚಾರ ಸಂಕೀರ್ಣ ನಿಜಕ್ಕೂ ಸ್ವಾಗತಾರ್ಹ ಕ್ರಮ, ಯಾಕೆಂದರೆ ಕನ್ನಡ ಹೊಟ್ಟೆಯ ಹಿಟ್ಟಿನ ಭಾಷೆ ಆಗಬೇಕೆಂಬ ವಿಚಾರ ಹೊಸದು ಮತ್ತು ಪ್ರಚಲಿತ, ಇದನ್ನು ಕೈಗೆತ್ತಿಕೊಂಡಿರುವ ವೇದಿಕೆ ವಿಷನ್ ಮತ್ತು ಮಿಷನ್ ಎರಡನ್ನು ಇಟ್ಟುಕೊಂಡು ಕೆಲ್ಸ ಮಾಡುತ್ತಿದೆ.
ಎಲ್ಲ ಕನ್ನಡಿಗರೂ ಇದರಲ್ಲಿ ಪಾಲ್ಗೊಂಡು, ನಮ್ಮ ಬೆಂಬಲ ಕೊಡಬೇಕು..ಎನಂತೀರಿ..ಅನ್ನುವುದು ಎನು ನಮ್ಮ ಮುಂದೆ ಇರುವುದೇ ಎರಡು ಆಯ್ಕೆ
ಉದ್ದಾರ ಆಗು, ಇಲ್ಲ ಕೊರಗುತ್ತ ಸಾಯಿ ಅನ್ನುವದರ ಮಧ್ಯೆ ಯಾವುದನ್ನು ಆಯ್ಕೆ ಮಾಡುತ್ತಿರಿ ನೀವೆ ಹೇಳಿ ?
(ಸ್ನೇಹ ಸೇತು - ಪ್ರವೀಣ್ ಬಿ.ಎಸ್.)
http://chum-banavaasi.blogspot.com/
0 ಕಾಮೆಂಟ್(ಗಳು):
ಒಂದು ಕಮೆಂಟನ್ನು ಪೋಸ್ಟ್ ಮಾಡಿ